ರಾಷ್ಟ್ರೀಯ ಐಸ್ ಸ್ಕೇಟೀಂಗ್ : ಚಿನ್ನ ಗೆದ್ದ ಅವನಿ ,ಮಹೇಶ್ಗೆ ಬೆಳ್ಳಿ ಪದಕ
ಮಂಗಳೂರು, ಜ. 11: ಇತ್ತೀಚೆಗೆ 13ನೆ ರಾಷ್ಟ್ರೀಯ ಐಸ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ಶಿಪ್ ಹರಿಯಾಣದ ಗುರುಗ್ರಾಮ್ನಲ್ಲಿ ನಡೆಯಿತು. ಸ್ಪರ್ಧಾ ಕೂಟವನ್ನು ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆ ಏರ್ಪಡಿಸಿತ್ತು.
ಈ ಸ್ಪರ್ಧಾಕೂಟದಲ್ಲಿ ಕರ್ನಾಟಕ ರಾಜ್ಯ ವನ್ನು ಪ್ರತಿನಿಧಿಸಿದ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ನ ಸ್ಕೇಟಿಂಗ್ ಪಟುಗಳಾದ ಅವನಿ ಎಸ್. ಕುಮಾರ್ ಚಿನ್ನ ಗೆದ್ದುದರ ಜೊತೆಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಳು.
ಶ್ರವಣ್ ಮಹೇಶ್ ಬೆಳ್ಳಿ ಪದಕ ಗಳಿಸಿದರು.
ಇವರು ತರಬೇತುದಾರ ಮಹೇಶ್ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
Next Story