ಮದುವೆ ವಿಳಂಬ: ಯುವತಿ ಆತ್ಮಹತ್ಯೆ
ಹಿರಿಯಡ್ಕ, ಜ.23: ಮದುವೆ ವಿಳಂಬಗೊಂಡ ಚಿಂತೆಯಲ್ಲಿ ಯುವತಿ ಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕ ಪಾಪುಜೆ ಎಂಬಲ್ಲಿ ನಡೆದಿದೆ.
ಮೃತರನ್ನು ಪಾಪುಜೆಯ ರೇವತಿ ಯಾನೆ ಸಂಗೀತಾ(35) ಎಂದು ಗುರು ತಿಸಲಾಗಿದೆ. ಜ.16ರಂದು ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದ ಸಂಗೀತಾ ನಾಪತ್ತೆಯಾಗಿದ್ದರು. ಜ.22ರಂದು ಸಂಜೆ ವೇಳೆ ಮನೆ ಸಮೀಪದ ಹಾಡಿಯಲ್ಲಿ ಸಂಗೀತಾ ಮೃತದೇಹ ಪತ್ತೆಯಾಗಿದೆ.
ಸರಿಯಾದ ನೆಂಟಸ್ಥಿತಿಗೆ ಪ್ರಯತ್ನಿಸಿದರೂ, ಸರಿಯಾದ ವರ ಸಿಗದೇ ಮದುವೆ ವಿಳಂಬಗೊಂಡ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಸಂಗೀತಾ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story