ಮಾ.8-9: ಚರ್ಮರೋಗ ತಪಾಸಣೆ ಶಿಬಿರ
ಮಂಗಳೂರು, ಫೆ.24: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಫಾ. ಮುಲ್ಲರ್ ವೈದ್ಯಕೀಯ ಆಸ್ಪತ್ರೆಯ ಚರ್ಮರೋಗ ವಿಭಾಗದಲ್ಲಿ ಮಾ.8 ಮತ್ತು 9ರಂದು ಉಚಿತ ಮಹಿಳಾ ಚರ್ಮರೋಗ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ ಚರ್ಮರೋಗ ವಿಭಾಗಕ್ಕೆ ಬರುವ ಎಲ್ಲಾ ಮಹಿಳಾ ರೋಗಿಗಳಿಗೆ ಉಚಿತ ನೋಂದಾವಣೆ ಒದಗಿಸಲಾಗುತ್ತದೆ. ಸೌಂದರ್ಯವರ್ಧಕ ಚಿಕಿತ್ಸೆಗಳಾದ ಲೇಸರ್ ಕೂದಲು ತೆಗೆಯುವಿಕೆ, ಮೊಡವೆ ಕಲೆಗಳ ಚಿಕಿತ್ಸೆ, ಫೋಟೊಥೆರಪಿ, ಪೀಲಿಂಗ್ ಚಿಕಿತ್ಸೆಗಳ ಮೇಲೆ ಶೇ.50ರಷ್ಟು ರಿಯಾಯಿತಿ ಒದಗಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story