ಇಂದಿನಿಂದ ಮಂಗಳೂರು ವಿವಿಯಲ್ಲಿ ಚಲನಚಿತ್ರೋತ್ಸವ
ಮಂಗಳೂರು, ಮಾ.22: ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ(ಎಂಸಿಜೆ) ವತಿಯಿಂದ ಮಾ.23, 24ರಂದು ಚಲನಚಿತ್ರೋತ್ಸವ ನಡೆಯಲಿದೆ.
ಮಂಗಳ ಗಂಗೋತ್ರಿಯ ಎಂಸಿಜೆ ವಿಭಾಗದ ಸಭಾಂಗಣದಲ್ಲಿ ನಡೆಯುವ ಚಲನಚಿತ್ರೋತ್ಸವವನ್ನು ಚಿತ್ರ ನಿರ್ಮಾಪಕ ಡಾ.ರಿಚರ್ಡ್ ಕ್ಯಾಸ್ಟಲಿನೊ ಉದ್ಘಾಟಿಸಲಿದ್ದಾರೆ. ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದಿರುವ ಹಾಗೂ ಪ್ರಶಸ್ತಿ ವಿಜೇತ ಸಿನೆಮಾಗಳು ಪ್ರತಿ ದಿನ ಸಂಜೆ 4 ಗಂಟೆಗೆ ಪ್ರದರ್ಶನಗೊಳ್ಳಲಿದ್ದು, ಪ್ರವೇಶ ಉಚಿತವಾಗಿದೆ ಎಂದು ವಿವಿ ಎಂಸಿಜೆ ವಿಭಾಗದ ಮುಖ್ಯಸ್ಥೆ ಡಾ. ವಹೀದಾ ಸುಲ್ತಾನಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story