ದೇಶದ ಎಲ್ಲಾ ಐಟಿಐಗಳಲ್ಲಿ ಆನ್ಲೈನ್ ಪರೀಕ್ಷಾ ವ್ಯವಸ್ಥೆ: ಸಚಿವ ರೂಡಿ
ಕಾಸರಗೋಡು, ಮೇ 17: ದೇಶದ ಎಲ್ಲಾ ಐಟಿಐಗಳಲ್ಲೂ ಆನ್ಲೈನ್ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಪ್ರತಾಪ್ ರೂಡಿ ಹೇಳಿದರು.
ಬುಧವಾರ ಕಣ್ಣೂರಿಗೆ ತೆರಳುವ ದಾರಿ ಮಧ್ಯೆ ಕಾಞಂಗಾಡ್ನಲ್ಲಿನ ಆರ್ಫಾನೆಜ್ ಐಟಿಐಗೆ ಭೇಟಿ ನೀಡಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮಧ್ಯಪ್ರದೇಶದಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ತಂದು ಯಶಸ್ವಿಯಾಗಿದೆ. ಕೇರಳ, ಮಹಾರಾಷ್ಟ್ರ, ರಾಜಸ್ಥಾನ ಮೊದಲಾದೆಡೆ ಶೀಘ್ರವೇ ಈ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಮೊದಲಾದವರು ಜೊತೆಗಿದ್ದರು.
Next Story