ಕುಂಜತ್ತೂರಿನಲ್ಲಿ ರಕ್ತದಾನ ಶಿಬಿರ
ಕುಂಜತ್ತೂರು, ಮೇ 21: ಬ್ಲಡ್ ಡೋನರ್ಸ್ ಮಂಗಳೂರು, ಖಿದ್ಮತುಲ್ ಇಸ್ಲಾಂ ಕುಂಜತ್ತೂರು ಯುನಿಟ್ ಜಂಟೀ ಆಶ್ರಯದಲ್ಲಿ , ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಇಲ್ಲಿನ ಮಾಸ್ಕೋ ಯುನಿಟಿ ಹಾಲ್ ನಲ್ಲಿ ಜರುಗಿತು.
ಅಮ್ಮಿಚ್ಚ ಕುಂಜತ್ತೂರು ಇವರ ಸ್ಮರಣಾರ್ಥ ಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಹಾಗೂ ಸಮಾಜ ಸೇವೆಯಲ್ಲಿ ಸಹಕರಿಸಿದ ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಮನೋಜ್ ಎಮ್.ವಿ. ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಹಲವು ಸಮಾಜ ಸೇವೆಕರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಹಲವು ಗಣ್ಯ ವ್ಯಕ್ತಿಗಳು, ಯುವ ನೇತಾರರು, ಧಾರ್ಮಿಕ ಪಂಡಿತರು ಉಪಸ್ಥಿತರಿದ್ದು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಅಮ್ಮಿಚ್ಚರ ಸಮಾಜ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಖಿದ್ಮತುಲ್ ಇಸ್ಲಾಂ ಕುಂಜತ್ತೂರು ಯುನಿಟ್ ಇದರ ಸದಸ್ಯರು ಸಹಕರಿ ಸಿದರು.
Next Story