ಪಿಎಫ್ಐ ಯಿಂದ ರಂಝಾನ್ ಕಿಟ್ ವಿತರಣೆ
ಮಂಗಳೂರು, ಮೇ 28: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಳೂರು ಜಿಲ್ಲೆಯ ವತಿಯಿಂದ ಉಳ್ಳಾಲ, ಮೂಡುಬಿದಿರೆ, ಬೆಂಗರೆ, ಮುಲ್ಕಿ, ಮಂಗಳೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಈ ಬಾರಿ ನೂರಕ್ಕಿಂತ ಹೆಚ್ಚು ಕುಟುಂಬಗಳಿಗೆ ಸುಮಾರು ಎರಡು ಲಕ್ಷ ರೂ. ಮೌಲ್ಯದ ರಮಝಾನ್ ತಿಂಗಳ ಇಫ್ತಾರ್ ಅಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಮಂಗಳೂರಿನ ಕಚೇರಿಯಲ್ಲಿ ಕಿಟ್ ವಿತರಿಸುವ ಮೂಲಕ ಜಿಲ್ಲಾ ಧ್ಯಕ್ಷ ನವಾಝ್ ಉಳ್ಳಾಲ ಚಾಲನೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಖಾದರ್ ಕೆ., ಸಿರಾಜ್ ಕಾವೂರು, ಸದಸ್ಯರಾದ ಶರೀಫ್, ಅಬೂಬಕರ್, ಇಸ್ಮಾಯೀಲ್ ಪುತ್ತೂರು, ಸಿದ್ದೀಕ್ ಉಳ್ಳಾಲ, ಅಬೂಬಕರ್ ಹಾಜಿ, ಇಕ್ಬಾಲ್, ಸಾದಿಕ್, ಹಾರಿಸ್ ಮಲಾರ್, ಹರ್ಶಾದ್ ಮಂಗಳೂರು ಉಪಸ್ಥಿತರಿದ್ದರು.
Next Story