ಫಾದರ್ ಮುಲ್ಲರ್ : ರಾಷ್ಟ್ರೀಯ ಕಾರ್ಯಾಗಾರ
ಮಂಗಳೂರು, ಮೇ 31: ನಗರದ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ವಿಭಾಗದ ವತಿಯಿಂದ ಜೂ.3ರಂದು ಬೆಳಗ್ಗೆ 10 ಗಂಟೆಗೆ ಡೆಸೆನ್ನಿಯಲ್ ಮೆಮೋರಿಯಲ್ ಹಾಲ್ನಲ್ಲಿ ಕಾಲೇಜಿನ ರಾಷ್ಟ್ರೀಯ ಕಾರ್ಯಾಗಾರ ನಡೆಯಲಿದೆ.
ನಿಮ್ಹಾನ್ಸ್ ಕಾಲೇಜ್ ಆಫ್ ನರ್ಸಿಂಗ್ನ ಪ್ರಾಂಶುಪಾಲೆ ಡಾ.ಬಿ.ವಿ.ಕಾತ್ಯಾಯಿನಿ, ಮಣಿಪಾಲ ವಿವಿಯ ಪರಿಸರ ನಿರ್ವಾಹಕ ಡೆರಿಕ್ ಜೋಶುವ, ತಿರುಚಿರಪಳ್ಳಿ ಸೈಂಟ್ ಜೋಸೆಫ್ಸ್ ಕಾಲೇಜಿನ ಮಾಜಿ ಉಪ ಪ್ರಾಂಶುಪಾಲ ಹಾಗೂ ಎಚ್ಓಡಿ ಡಾ.ಫ್ರಾನ್ಸಿಸ್ ಜ್ಞಾನಶೇಖರ್, ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಯನ್ಸಸ್ನ ಪ್ರಾಂಶುಪಾಲ ಮತ್ತು ಡೀನ್ ಡಾ.ಫಾತಿಮಾ ಡಿಸಿಲ್ವ ಅವರು ಭಾಗವಹಿಸಲಿದ್ದಾರೆ.
ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story