ವಿದ್ಯಾರ್ಥಿನಿ ನಾಪತ್ತೆ
ಮಂಗಳೂರು, ಜು. 10: ನಗರದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಲೋವರ್ ಬೆಂದೂರ್ ನಿವಾಸಿ ರೇಷ್ಮಾ ವಿ.ಕೆ.(23) ನಾಪತ್ತೆಯಾದವರು ಎಂದು ಗುರುತಿಸಲಾಗಿದೆ.
ಆಕೆ ನಗರದ ಕಾಲೇಜೊಂದರಲ್ಲಿ ಓದುತ್ತಿದ್ದು, ಜು.9ರಂದು ಬೆಳಗ್ಗೆ ಸಹಪಾಠಿಗಳೊಂದಿಗೆ ಕಲಿಯಲಿದೆ ಎಂದು ಹೇಳಿ ಮನೆಯಿಂದ ಹೊರಟಿದ್ದಾರೆ ಎಂದು ತಿಳಿದುಬಂದಿದ್ದು, ಮಧ್ಯಾಹ್ನ ಸುಮಾರಿಗೆ ಆಕೆಯ ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story