ತೊಕ್ಕೊಟ್ಟು: ಕಾಂಪೌಂಡ್ ಗೋಡೆ ಏರಿದ ಕಾರು!
ಉಳ್ಳಾಲ, ಜು.31: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಆವರಣ ಗೋಡೆಯನ್ನೇರಿದ ಘಟನೆ ತೊಕ್ಕೊಟ್ಟಿನಲ್ಲಿ ಇಂದು ಬೆಳಗ್ಗೆ ನಡೆದಿದೆ.
ತೊಕ್ಕೊಟ್ಟಿನ ಮಾಯಾ ಬಾರ್ ಬಳಿ ಈ ಘಟನೆ ನಡೆದಿದೆ. ಕಾಸರಗೋಡು ಕಡೆಯಿಂದ ಮಂಗಳೂರಿನತ್ತ ಬರುತ್ತಿದ್ದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಕಟ್ಟಡಕ್ಕೆ ಢಿಕ್ಕಿಯಾಗಿ ಎದುರಿರುವ ಆವರಣ ಗೋಡೆಯನ್ನೇರಿದೆ.
ಇದರಿಂದ ಕಾರು ಭಾಗಶಃ ಜಖಂಗೊಂಡಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಕಾರು ಚಾಲಕ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Next Story