ತುಂಬೆ ಅಭಿಮಾನಿ ಬಳಗದಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
ಫರಂಗಿಪೇಟೆ ಜು 31: ತುಂಬೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಪ್ರಾರಂಭವಾದ ಎಲ್.ಕೆ.ಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ತುಂಬೆ ಅಭಿಮಾನಿ ಬಳಗದ ವತಿಯಿಂದ ಸಮವಸ್ತ್ರ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ತುಂಬೆ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ ಹಾಗೂ ಅಭಿಮಾನಿ ಬಳಗದ ಅಧ್ಯಕ್ಷ ದೇವ್ ದಾಸ್ ಪರ್ಲಕ್ಕೆ, ಮುಖ್ಯ ಸಂಚಾಲಕ ಡಾ.ಕೆ ಎಸ್ ಆಮೀರ್ ಅಹ್ಮದ್ ತುಂಬೆ ಹಾಗೂ ಮೊನಪ್ಪ ಮಜಿ, ಗೋಪಾಲಕೃಷ್ಣ ತುಂಬೆ, ಕಮಾಲ್ ವಳವೂರೂ, ಧನಂಜಯ ವಳವೂರು ಹಾಗೂ ತುಂಬೆ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
Next Story