ಬದರೀನಾಥರಿಗೆ ಹಂಸ ಕಾವ್ಯ ಪ್ರಶಸ್ತಿ ಪ್ರದಾನ

ಮಂಗಳೂರು, ಸೆ. 11: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಹಂಸಕಾವ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಯುವ ಕವಿ ಬದರೀನಾಥ ಜಹಗೀರದಾರ ಬಾಗಲಕೋಟೆ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿಯು 10 ಸಾವಿರ ನಗದು, ಫಲಕ, ಚಿನ್ನದ ಪದಕ ಒಳಗೊಂಡಿದೆ. ಸಾಹಿತಿ ಕಾ.ವೀ.ಕೃಷ್ಣದಾಸ್ ಅವರ ನಿವಾಸ ‘ರಜತ ಕುಟೀರ’ ನಡೆದ ಕವಿ ಕಾರ್ವ ಮಾಧುರ್ಯ ಸಂಗೀತ ಕವಿಗೋಷ್ಠಿಯಲ್ಲಿ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಶಿಕ್ಷಣ ತಜ್ಞ ಎಂ.ಜಿ.ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು.
ಮಂಗಳೂರು ಆಕಾಶವಾಣಿಯ ಹಿರಿಯ ಕಾರ್ಯನಿರ್ವಾಹಕ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ , ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ, ತುಳು ಸಾಹಿತ್ಯ ಅಕಾಡಮಿಯ ಸದಸ್ಯೆ ಸುಧಾ ನಾಗೇಶ್, ಪತ್ರಕರ್ತ ಗಣೇಶ್ ಪ್ರಸಾದ್ ಪಾಂಡೇಲು, ಉಪನ್ಯಾಸಕ, ಕವಿ ವ.ಉಮೇಶ ಕಾರಂತ, ಪತ್ರಕರ್ತೆ ಮಾಲತಿ ಶೆಟ್ಟಿ ಮಾಣೂರು, ಸದಾನಂದ ನಾರಾವಿ, ಮಂಗಳೂರು ಚುಟುಕು ಸಾಹಿತ್ಯ ಪರಿಷತ್‌ನ ಕೋಶಾಧಿಕಾರಿ ಹರೀಶ ಸುಲಾಯ ಒಡ್ಡಂಬೆಟ್ಟು, ಸಂಘಟಕ ಲಕ್ಷ್ಮೀನಾರಾಯಣ ರೈ ಹರೇಕಳ, ಪ್ರವೀಣ್ ಅಮ್ಮೆಂಬಳ, ವಿಜೇಶ್ ದೇವಾಡಿಗ, ಲತಾ ಕೃಷ್ಣದಾಸ್, ತೋನ್ಸೆ ಪುಷ್ಕಳ್ ಕುಮಾರ್, ದೇವಕುಮಾರ್, ಮಾ.ರಜತ್, ಲಹರಿ ಮಂಜುನಾಥ್ ಮತ್ತು ಸುರೇಶ್ ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.





