ಮೈಸೂರು : ಗಿನ್ನೆಸ್ ದಾಖಲೆಗೆ ಯೋಗ ತಾಲೀಮು
ಮೈಸೂರು,ಜೂ.17: ಮತ್ತಷ್ಟು 'ಯೋಗ' ದಾಖಲೆಗೆ ಅರಮನೆ ನಗರಿ ಮೈಸೂರಿನಲ್ಲಿ ಇಂದು ಭರ್ಜರಿ ತಾಲೀಮು ನಡೆಸಲಾಯಿತು.
ನಗರದ ರೇಸ್ಕೋರ್ಸ್ ಆವರಣದಲ್ಲಿ ರವಿವಾರ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆ ಆಯೋಜಿಸಿದ್ದ ಯೋಗ ತಾಲೀಮಿನಲ್ಲಿ ಸಾವಿರಾರು ಮಂದಿ ಭಾಗವಹಿಸಿ ದಾಖಲೆಗಾಗಿ ತಾಲೀಮು ನಡೆಸಿದರು.
ಕಳೆದ ಬಾರಿ 54 ಸಾವಿರ ಯೋಗ ಪಟುಗಳು ಭಾಗವಹಿಸಿ ಮೈಸೂರು ಗಿನ್ನಿಸ್ ದಾಖಲೆ ಮಾಡಿದ್ದರು. ಈ ಬಾರಿ 75 ಸಾವಿರಕ್ಕೂ ಹೆಚ್ಚು ಮಂದಿ ಯೋಗ ಪಟುಗಳು ಭಾಗವಹಿಸುವ ಮೂಲಕ ಮತ್ತೊಂದು ದಾಖಲೆ ಬರೆಯಲು ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ.
ಈ ವೇಳೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಈ ಬಾರಿಯೂ ಯೋಗ ದಿನಾಚರಣೆಯಂದು ಮೈಸೂರು ಗಿನ್ನಿಸ್ ದಾಖಲೆ ಮಾಡಲಿದೆ. ಈ ಬಾರಿ ಯೋಗ ದಿನಾಚರಣೆಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಭರವಸೆ ನೀಡಿದರು. ನಗರದಾದ್ಯಂತ ಇರುವ ಯೋಗ ಶಾಲೆಗಳ ಯೋಗಪಟುಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
Next Story