ಹಾಸನ: ಬಸ್-ಆಟೋ ಮುಖಾಮುಖಿ ಢಿಕ್ಕಿ; ಮೂವರಿಗೆ ಗಂಭೀರ ಗಾಯ
ಹಾಸನ,ಜು.12: ನಗರದ ವರ್ತುಲ ರಸ್ತೆಯ ರಾಜೀವ್ ಕಾಲೇಜಿನ ಸಮೀಪ ಕೆಎಸ್ಆರ್ಟಿಸಿ ಹಾಗೂ ಆಟೋ ನಡುವೆ ನಡೆದ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾದ ಘಟನೆ ಗುರುವಾರ ನಡೆದಿದೆ.
ಹಾಸನ-ಅರಸೀಕೆರೆ ನಾಮ ಫಲಕವುಳ್ಳ ಬಸ್ಸೊಂದು ವರ್ತುಲ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋ ನಡುವೇ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಆಟೋದಲ್ಲಿದ್ದ ಮೂವರಿಗೆ ಹೆಚ್ಚಿನ ಗಾಯಗಳಾಗಿದ್ದು, ತಕ್ಷಣ ತುರ್ತು ವಾಹನದಲ್ಲಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story