ಕೊಳ್ಳೇಗಾಲ: ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಗೂಡ್ಸ್ ಆಟೋ
ಕೊಳ್ಳೇಗಾಲ, ಆ.09: ತಾಲೂಕಿನ ಟಗರಪುರ ಗ್ರಾಮದ ಬಳಿ ಗೂಡ್ಸ್ ಆಟೋ ಚಾಲಕನ ನಿಯಂತ್ರಣ ತಪ್ಪಿ ಮನೆಯೊಳಗೆ ನುಗ್ಗಿದ ಘಟನೆ ಗುರುವಾರ ನಡೆದಿದೆ.
ಗೂಡ್ಸ್ ಆಟೋವೊಂದು ಕೊಳ್ಳೇಗಾಲದಿಂದ ಮೈಸೂರಿಗೆ ಕಡೆಗೆ ಅತೀವೇಗವಾಗಿ ಸಾಗುತ್ತಿದ್ದಾಗ ಎದುರಿಗೆ ಬಂದ ವಾಹನಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆಯ ಬದಿಯ ಮನೆಯೊಳಗೆ ನುಗ್ಗಿದೆ ಎನ್ನಲಾಗಿದೆ.
ಗೂಡ್ಸ್ ಆಟೋ ಢಿಕ್ಕಿ ಹೊಡೆದ ಪರಿಣಾಮ ಮನೆಯ ಹೆಂಚುಗಳು ಜಖಂಗೊಂಡು ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಆಗಮಿಸಿ, ಪರಿಶೀಲಿಸಿದ್ದಾರೆ.
Next Story