ಸುಂಟಿಕೊಪ್ಪ: ಕಾಲುಜಾರಿ ಹೊಳೆಗೆ ಬಿದ್ದು ಮಹಿಳೆ ಮೃತ್ಯು
ಸುಂಟಿಕೊಪ್ಪ,ಸೆ.2: ಮಾದಾಪುರ ಹೊಳೆಯಲ್ಲಿ ಕಾಲುಜಾರಿ ಬಿದ್ದು ಮಹಿಳೆಯೊರ್ವಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಮಾದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂಬೂರು ಬಾಣೆಯ ನಿವಾಸಿ ಸೀನಾ ಎಂಬವರ ಪತ್ನಿ ಭಾಗ್ಯ (42) ಎಂಬವರು ಶುಕ್ರವಾರ ಸಂಜೆ ಮಾದಾಪುರಕ್ಕೆ ಆಗಮಿಸಿದ್ದ ಸಂದರ್ಭ ಕಾಲುಜಾರಿ ಹೊಳೆಗೆ ಬಿದ್ದು ಸಾವನ್ನಪ್ಪಿದ್ದು, ಮೃತದೇಹ ಇಂದು ಸಂಜೆ ಮಾದಾಪುರ ಹೊಳೆಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದು, ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story