ಇಂದು ಅನಿತಾ , ನಾಳೆ ಆನಂದ್ ಶಾಸಕರಾಗಿ ಪ್ರಮಾಣವಚನ ಸ್ವೀಕಾರ
ಬೆಂಗಳೂರು, ನ.15: ರಾಮನಗರ ಉಪಚುನಾವಣೆಯಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿರುವ ಜೆಡಿಎಸ್ ನ ಅನಿತಾ ಕುಮಾರ ಸ್ವಾಮಿ ಗುರುವಾರ ಮಧ್ಯಾಹ್ನ 3:30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿರುವರು.
ಜಮಖಂಡಿ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನ ಆನಂದ್ ಸಿದ್ದು ನ್ಯಾಮೆಗೌಡ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸುವರು.
ಅನಿತಾ ಕುಮಾರ ಸ್ವಾಮಿ ಅವರು ವಿಧಾನಸಭೆಯ ಸ್ವೀಕರ್ ರಮೇಶ್ ಕುಮಾರ್ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವರು.
Next Story