ಮನೆಯಲ್ಲಿ ಸಿಲಿಂಡರ್ ಅಳವಡಿಸುವ ವೇಳೆ ಸ್ಫೋಟ: ಅಪಾರ ಹಾನಿ
ಜಗಳೂರು,ಡಿ.20: ತಾಲೂಕಿನ ರಸ್ತೆ ಮಾಚಿಕೆರೆ ಗ್ರಾಮದಲ್ಲಿ ಸಿಲಿಂಡರ್ ಅಳವಡಿಸುವ ಸಂದರ್ಭ ಸ್ಫೋಟಗೊಂಡು ಮನೆಯಲ್ಲಿರುವ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಷಡಾಕ್ಷರಪ್ಪ, ಶರಣಮ್ಮ ಎಂಬವರ ಮನೆಯಲ್ಲಿ ಬೆಳಗ್ಗೆ 9 ಗಂಟೆಯ ಸಮಯದಲ್ಲಿ ಗ್ಯಾಸ್ ಬದಲಾಯಿಸುವ ವೇಳೆ ಪಕ್ಕದಲ್ಲಿ ಒಲೆ ಉರಿಯುತ್ತಿದ್ದು, ಬೆಂಕಿಯ ಜ್ವಾಲೆ ತಗುಲಿ ಸಿಲಿಂಡರ್ ಸ್ಫೋಟಗೊಂಡಿದೆ. ಇದರ ರಸಭಕ್ಕೆ ಮನೆ ಮೇಲ್ಚಾವಣಿ ಕಿತ್ತಿದ್ದು, ಮನೆಯಲ್ಲಿದ್ದ ವಸ್ತುಗಳು, ದಾಖಲೆ ಪತ್ರಗಳು ಸುಟ್ಟು ಕರಕಲಾಗಿದೆ.
ಸ್ಫೋಟದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಅಗ್ನಿಶಾಮಕ ದಳಗ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದರು.
Next Story