ಕೊಳ್ಳೇಗಾಲ: ವಿಷ ಪ್ರಸಾದ ಸೇವಿಸಿದ್ದ ಮಹಿಳೆಗೆ ಗರ್ಭಪಾತ
ಕೊಳ್ಳೇಗಾಲ,ಡಿ.22: ಸುಳ್ವಾಡಿ ಗ್ರಾಮದ ಕಿಚ್ ಗುತ್ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ ಸೌಂದರ್ಯ ಎಂಬ ಗರ್ಭಿಣಿ ಮಹಿಳೆಗೆ ಆಸ್ಪತ್ರೆಗೆ ಕರೆ ತರುವ ಮಾರ್ಗ ಮಧ್ಯೆ ಗರ್ಭಪಾತವಾಗಿದೆ.
ಡಿ.14 ರಂದು ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ಸೇವಿಸಿದ್ದ ಸೌಂದರ್ಯ, ಮೈಸೂರಿನ ಸೆಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿ.18 ರಂದು ಬಿದರಳ್ಳಿ ಗ್ರಾಮಕ್ಕೆ ತೆರಳಿದ್ದರು. ಬಿದರಳ್ಳಿ ಗ್ರಾಮದಲ್ಲಿದ್ದ ಅವರಿಗೆ ಶುಕ್ರವಾರ ರಾತ್ರಿ ಹೊಟ್ಟೆ ನೋವು ಹಾಗೂ ತೀವ್ರ ರಕ್ತಸ್ರಾವ ಉಂಟಾಗಿದೆ.
ತಕ್ಷಣ ಅಂಬುಲೆನ್ಸ್ ಅನ್ನು ಕರೆಸಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಗರ್ಭಪಾತವಾಗಿದೆ. ನಂತರ ಆಕೆಯನ್ನು ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
Next Story