ಪೆಟ್ರೋಲ್ ಬಂಕ್ ಗೆ ಆಕಸ್ಮಿಕ ಬೆಂಕಿ: ಸಿಡಿದ ಪೆಟ್ರೋಲ್ ಟ್ಯಾಂಕ್ ಗಳು
ಚಿತ್ರದುರ್ಗ,ಜ.16: ನಗರದ ಜೆಸಿಆರ್ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಪೆಟ್ರೋಲ್ ಟ್ಯಾಂಕ್ ಗಳು ಭಾರೀ ಸದ್ದಿನೊಂದಿಗೆ ಸಿಡಿದ ಘಟನೆ ನಡೆದಿದೆ.
ಪೆಟ್ರೋಲ್ ಟ್ಯಾಂಕರ್ ನಿಂದ ಪೆಟ್ರೋಲ್ ಇಳಿಸುವಾಗ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಭಾರಿ ಶಬ್ದದಿಂದ ಸಿಡಿಯುತ್ತಿದ್ದ ಟ್ಯಾಂಕ್ ಗಳು ಜನರನ್ನು ಭಯ ಭೀತಗೊಳಿಸಿದೆ.
ಬಂಕ್ ವಾಸುದೇವರೆಡ್ಡಿ ಎಂಬವರಿಗೆ ಸೇರಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
Next Story