ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಮೈಸೂರು,ಜ.18: ಚಾಮುಂಡಿ ಬೆಟ್ಟದಿಂದ ಉತ್ತನಹಳ್ಳಿಗೆ ಹೋಗುವ ರಸ್ತೆಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದೆ.
ಮಹಿಳೆಯ ದೇಹದ ಬಹಳಷ್ಟು ಭಾಗ ಸುಟ್ಟಿರುವುದರಿಂದ ಮತ್ತು ಕೊಳೆತು ಹೋಗಿರುವುದರಿಂದ ಗುರುತು ಪತ್ತೆಯಾಗಿಲ್ಲ. ಸುಮಾರು 25ರಿಂದ 35 ವರ್ಷದವರಾಗಿರಬೇಕೆಂದು ಅಂದಾಜಿಸಲಾಗಿದ್ದು, ದೇಹದ ಮೇಲೆ ಚೂಡಿದಾರ ಧರಿಸಿರುವ ಗುರುತಿದೆ. ಒಂದು ಕಾಲಿಗೆ ದೇವಸ್ಥಾನದಲ್ಲಿ ಕಟ್ಟುವಂತಹ ಕಪ್ಪುದಾರ ಕಟ್ಟಲಾಗಿದ್ದು, ಕೈಬೆರಳುಗಳಲ್ಲಿ ಪ್ಲಾಸ್ಟಿಕ್ ಮತ್ತು ಬೆಳ್ಳಿಯ ಉಂಗುರಗಳಿವೆ. ಮಹಿಳೆ ಬೆಂಕಿ ಹಂಚಿಕೊಂಡಿರಬೇಕು ಅಥವಾ ಯಾರೋ ಕೊಲೆ ಮಾಡಿ ಶವವನ್ನು ಸುಟ್ಟಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story