ಬೈಕ್-ಟಾಟಾ ಏಸ್ ಮುಖಾಮುಖಿ ಢಿಕ್ಕಿ: ಇಬ್ಬರು ಮೃತ್ಯು
ಹನೂರು,ಜ.22: ಬೈಕ್ ಮತ್ತು ಟಾಟಾ ಏಸ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸಾವನಪ್ಪಿರುವ ಘಟನೆ ಹನೂರು ತಾಲೂಕಿನ ಲೋಕ್ಕನಹಳ್ಳಿ ಸಮೀಪ ನಡೆದಿದೆ.
ಹನೂರು ಪಟ್ಟಣ ನಿವಾಸಿ ಮಹೇಶ್ (34) ಲೊಕ್ಕನಹಳ್ಳಿ ಗ್ರಾಮದ ನಿವಾಸಿ ಬಸವ (52) ಮೃತಪಟ್ಟವರು.
ಘಟನೆ ವಿವರ: ಮೃತ ಮಹೇಶ್ ಮತ್ತು ಬಸವ ಎಂಬವರು ಪಿಜಿ ಪಾಳ್ಯದ ಬಾರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಂಗಳವಾರ ಮದ್ಯಾಹ್ನ ಒಂದೇ ಬೈಕ್ನಲ್ಲಿ ಪಿಜಿ ಪಾಳ್ಯ ಗ್ರಾಮದಿಂದ ಹನೂರಿನ ಕಡೆ ಆಗಮಿಸುತ್ತಿದ್ದರು. ಲೊಕ್ಕನಹಳ್ಳಿ ಕೆರೆ ಸಮೀಪ ಎದುರಿನಿಂದ ಬಂದ ಗೂಡ್ಸ್ ಆಟೋ ನಡುವೆ ಢಿಕ್ಕಿ ಸಂಭವಿಸಿದ್ದು, ಮಹೇಶ್ ಸ್ಥಳದಲ್ಲಿಯೇ ಮೃತಪಟ್ಟರೆ, ಬಸವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಇನ್ಸ್ ಪೆಕ್ಟರ್ ಮೋಹಿತ್ ಸಹದೇವ್ ಸ್ಥಳ ಪರಿಶೀಲಿಸಿದರು. ಮೃತ ದೇಹವನ್ನು ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.