ಗೋಣಿಕೊಪ್ಪ: ಅಕ್ರಮ ಮದ್ಯ ಮಾರಾಟ; ಓರ್ವನ ಬಂಧನ
ಒಳ ಚಿತ್ರದಲ್ಲಿ ಬಂಧಿತ ಆರೋಪಿ
ಮಡಿಕೇರಿ, ಫೆ.5 :ದ್ವಿಚಕ್ರ ವಾಹನದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಬಂಧಿಸಿರುವ ಗೋಣಿಕೊಪ್ಪ ಪೊಲೀಸರು ಆರೋಪಿಯಿಂದ 95 ಪ್ಯಾಕ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ತಮಿಳರ ಗಾಂಧಿ (50) ಬಂಧಿತ ಆರೋಪಿಯಾಗಿದ್ದು, ಸ್ಕೂಟರ್ ಸೇರಿ ತಲಾ 90 ಎಂ. ಎಲ್ ಪ್ರಮಾಣವಿರುವ 95 ಟೆಟ್ರಾಪ್ಯಾಕ್ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದೆ.
ಅತ್ತೂರು ಗ್ರಾಮದ ತಿಲಕ್ ತಿಮ್ಮಯ್ಯ ಅವರ ಲೈನ್ ಮನೆಗೆ ತೆರಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿದ್ದಾರೆ.
ವೃತ್ತ ನಿರೀಕ್ಷಕ ದಿವಾಕರ್ ಮಾರ್ಗದರ್ಶನದಲ್ಲಿ ಪೊಲೀಸ್ ಉಪನಿರೀಕ್ಷಕ ಶ್ರೀಧರ್, ಸಿಬ್ಬಂದಿ ಕೃಷ್ಣ, ಹನೀಫ್, ಮಂಜುನಾಥ್, ಸುನಿಲ್, ಶಂಕರ್ ಕಾರ್ಯಾಚರಣೆ ನಡೆಸಿದರು.
Next Story