ಹನೂರು: ಸರಕಾರಿ ಪ್ರೌಡಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ
ಹನೂರು,ಫೆ.14: ತಾಲೂಕಿನ ಮೀಣ್ಯಂ ಸರ್ಕಾರಿ ಪ್ರೌಡಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರವನ್ನು ಉದ್ದೇಶಿಸಿ ಪ್ರೌಡಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಎಸೆಸೆಲ್ಸಿ ವಿದ್ಯಾರ್ಥಿಗಳು ಮುಂದಿನ ತಿಂಗಳು ನಡೆಯುವ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಶಾಲೆಗೆ ಮತ್ತು ತಾಲೂಕಿಗೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷ ಮಹದೇವಮ್ಮ, ಬಿಆರ್ಪಿ ದಿನೇಶ್, ಸಿಆರ್ಪಿ ಮಹದೇವಪ್ರಸಾದ್, ಸ್ಥಳೀಯರಾದ ಬೈರಪ್ಪ, ಹುಚ್ಚಯ್ಯ, ಎಸ್ಎಡಿಎಂಸಿ ಅಧ್ಯಕ್ಷ ಮುರುಗೇಶ್, ಮುಖ್ಯ ಶಿಕ್ಷಕ ಶರವಣ್ಣ ಸೇರಿದಂತೆ ಅನೇಕರು ಹಾಜರಿದ್ದರು.
Next Story