ನಾಪತ್ತೆಯಾಗಿದ್ದ ವಕೀಲೆ ಶವವಾಗಿ ಪತ್ತೆ
ಮಂಡ್ಯ, ಮಾ.7: ನಾಪತ್ತೆಯಾಗಿದ್ದ ಮಹಿಳಾ ವಕೀಲರೊಬ್ಬರು ಶವವಾಗಿ ಪತ್ತೆಯಾದ ಘಟನೆ ಮಳವಳ್ಳಿ ತಾಲೂಕಿನ ಮಾದಹಳ್ಳಿ ಸಮೀಪ ನಡೆದಿದೆ.
ಮಳವಳ್ಳಿ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದ ಮಾದಲಾಂಬಿಕೆ ಎಂಬವರು ಫೆ.25ರಂದು ಕೆಲಸಕ್ಕೆಂದು ಹೋದವರು ಕಾಣೆಯಾಗಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಾಣೆಯಾಗಿದ್ದ ಮಾದಲಾಂಬಿಕೆಯ ಮೃತ ದೇಹ ತಳಗವಾದಿ ರಸ್ತೆಯ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story