ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಶಿವಮೊಗ್ಗ, ಮಾ. 19: ಇಲ್ಲಿನ ಹಳೇ ಮಂಡ್ಲಿ ಬಡಾವಣೆಯ ಮನೆಯೊಂದರಲ್ಲಿ ಯುವ ಪ್ರೇಮಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ.
ನ್ಯೂ ಮಂಡ್ಲಿಯ ಕೌಶಿಕ್ (19) ಹಾಗೂ ಸಾಗರ ತಾಲೂಕಿನ ಮೆಹತಾಜ್ ಶಿರಿನ್ (18) ಆತ್ಮಹತ್ಯೆಗೆ ಶರಣಾದವರೆಂದು ಗುರುತಿಸಲಾಗಿದೆ. ಇವರಿಬ್ಬರು ನಗರದ ಕಾಲೇಜ್ವೊಂದರ ವಿದ್ಯಾರ್ಥಿಗಳಾಗಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಧರ್ಮ ಬೇರೆಯಾಗಿದ್ದ ಕಾರಣದಿಂದ, ಎರಡೂ ಮನೆಯವರು ಮದುವೆಗೆ ಒಪ್ಪುವುದಿಲ್ಲವೆಂಬ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯ ನಂತರವಷ್ಟೆ ಸತ್ಯಾಂಶ ತಿಳಿದುಬರಬೇಕಾಗಿದೆ.
Next Story