ಮೋದಿ ರಾಜ್ಯ ಪ್ರವಾಸ ಮುಂದೂಡಿಕೆ
ಬೆಂಗಳೂರು, ಎ.5: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ರಾಜ್ಯ ಪ್ರವಾಸ ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.
ನರೇಂದ್ರ ಮೋದಿ, ಎ.8ರಂದು(ಸೋಮವಾರ) ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಕೋಟೆನಾಡು ಚಿತ್ರದುರ್ಗದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕಿತ್ತು. ಆದರೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳುವ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ಮಂಗಳವಾರ (ಎ.9) ಬೆಳಗ್ಗೆ ಮೈಸೂರಿನಲ್ಲಿ ಹಾಗೂ ಸಂಜೆ ಚಿತ್ರದುರ್ಗದಲ್ಲಿ ನರೇಂದ್ರ ಮೋದಿ, ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ. ಅದೇ ರೀತಿ, ಕರ್ನಾಟಕದಲ್ಲಿ ಮಂಗಳೂರು, ಚಿಕ್ಕೋಡಿ, ಬೆಂಗಳೂರು, ಗಂಗಾವತಿ ಸೇರಿದಂತೆ ಒಟ್ಟು 8 ಕಡೆ ನರೇಂದ್ರ ಮೋದಿ, ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
Next Story