ಕಲ್ಯಾಣಿಯಲ್ಲಿ ಒಂದೇ ಕುಟುಂಬದ ಐವರು ಜಲಸಮಾಧಿ
ಬೆಂಗಳೂರು, ಎ.27: ನೆಲಮಂಗಲ ತಾಲೂಕಿನ ಸಿದ್ಧರಬೆಟ್ಟದ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ.
ಕೆಂಗೇರಿಯ ರೇಷ್ಮಾ ,(22) ಮುನೀರ್ ಖಾನ್ (49), ಯಾರಬ್ ಖಾನ್(21), ಮುಬೀನ್ ತಾಜ್(21) , ಸಲ್ಮಾನ್ ಎಂಬವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ.
ದಾಬಸ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ.
Next Story