ಸೋಮವಾರಪೇಟೆಯಲ್ಲಿ ರಸ್ತೆ ಅಪಘಾತ: ಮಗು ಮೃತ್ಯು, 18 ಮಂದಿಗೆ ಗಾಯ
ಸೋಮವಾರಪೇಟೆ: ರಸ್ತೆ ಅಪಘಾತಕ್ಕೆ ಮಗುವೊಂದು ಮೃತಪಟ್ಟು 18 ಮಂದಿ ಗಾಯಗೊಂಡ ಘಟನೆ ಕೋವರ್ಕೊಲ್ಲಿ ತಿರುವಿನಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬೆಳಗಾಮ್ ಮೂಲದ ತೀರ್ಥಯಾತ್ರೆ ತಂಡದ ವಾಹನ ಅಪಘಾತಕ್ಕೆ ಒಳಗಾಗಿ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದ್ದು, 9 ಮಕ್ಕಳು ಸೇರಿದಂತೆ 18 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story