ಭಾರೀ ಮಳೆಗೆ ಕೊಚ್ಚಿ ಹೋದ ನಾಲ್ರೋಡ್ನ ಹಳ್ಳದ ತಾತ್ಕಾಲಿಕ ರಸ್ತೆ
ಹನೂರು, ಜೂ.7: ತಾಲೂಕಿನ ನಾಲ್ರೋಡ್ನ ಹಳ್ಳದ ಸೇತುವೆ ಕಾಮಗಾರಿಯು ಮುಗಿಯುವವರೆಗೂ ತಾತ್ಕಲಿಕವಾಗಿ ನಿರ್ಮಿಸಿರುವ ಮಣ್ಣಿನ ರಸ್ತೆ ಬುಧವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಮಣ್ಣು ಕೂಚ್ಚಿ ಹೋಗಿದೆ. ಇದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ
ಹನೂರು ಕ್ಷೇತ್ರ ವ್ಯಾಪ್ತಿಯ ಗಡಿ ಹಂಚಿನ ಗ್ರಾಮಗಳಾದ ಹೂಗ್ಯಂ, ಕೂಡ್ಕೂರು, ಮಿಣ್ಯಂ ಜಲ್ಲಿಪಾಳ್ಯ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಸಹ ಇದ್ದಾಗಿದೆ. ಈ ಮಾರ್ಗದಲ್ಲಿ ಪ್ರತಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ ಹಾಗೂ ಶಾಲಾ ಕಾಲೇಜು ಮಕ್ಕಳು ಕೂಳ್ಳೇಗಾಲ, ಹನೂರು ಪಟ್ಟಣಕ್ಕೆ ಪ್ರತಿ ನಿತ್ಯ ತೆರಳುವ ಪ್ರಮುಖವಾದ ಮಾರ್ಗವಾಗಿದೆ. ಸಂಪೂರ್ಣ ಕೆಳ ಮಟ್ಟದಲ್ಲಿದ್ದ ನಾಲ್ರೋಡ್ ಹಳ್ಳದ ಸೇತುವೆಯನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ನೂತನ ಸೇತುವೆ ಕಾಮಗಾರಿ ನಿರ್ಮಾಣ ಆರಂಭಿಸಲಾಗಿದೆ. ಕಳೆದ 3 ವರ್ಷಗಳ ಹಿಂದೆ ಕಾವಗಾರಿ ಪ್ರಕ್ರಿಯೆ ಪ್ರಾರಂಭಗೂಂಡರೂ ತಾತ್ಕಲಿಕ ಕಾರಣಗಳ ನೆಪವೊಡ್ಡಿ ಸೇತುವೆಯ ನಿರ್ಮಾಣದ ಪ್ರಾರಂಭದ ದಿನಗಳಲ್ಲಿಯೇ ಸ್ಥಗಿತಗೂಳಿಸಲಾಗಿತ್ತು.