ಮದುವೆ ದಿಬ್ಬಣದ ಲಾರಿ ಅಪಘಾತ: ಮೂವರು ಮಹಿಳೆಯರು ಮೃತ್ಯು
ಆರು ಮಂದಿಯ ಸ್ಥಿತಿ ಚಿಂತಾಜನಕ
ದಾವಣಗೆರೆ, ಜ.29: ಚಾಲಕನ ನಿಯಂತ್ರಣ ತಪ್ಪಿ ಮದುವೆ ದಿಬ್ಬಣದ ಲಾರಿ ರಸ್ತೆ ಬದಿಯ ಮೈಲು ಕಲ್ಲಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ಮಾವಿನ ಕಟ್ಟೆ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಆಂದ್ರಪ್ರದೇಶದ ಇಂದೂಪುರದ ವರಲಕ್ಷ್ಮೀ(40) ಅನುಷಾ (38)ಮತ್ತು ರತ್ಮಮ್ಮ (56)ಎಂದು ಗುರುತಿಸಲಾಗಿದ್ದು. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದು, ಈ ಪೈಕಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಆಂದ್ರಪ್ರದೇಶದ ಇಂದೂರಿನಿಂದ ಮದುವೆ ದಿಬ್ಬಣದ ಈ ಲಾರಿ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಬಳಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಮೈಲುಕಲ್ಲಿಗೆ ಢಿಕ್ಕಿ ಹೊಡೆದು, ಮಗುಚಿ ಬಿದ್ದಿದೆ. ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ಚನ್ನಗಿರಿ ಮತ್ತು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story