'ಲವ್ ಯೂ ಪಾಕ್ ಆರ್ಮಿ' ಪೋಸ್ಟ್ ಶೇರ್ ಆರೋಪ: ಓರ್ವನ ಬಂಧನ
ಸಾಂದರ್ಭಿಕ ಚಿತ್ರ
ವಿಜಯಪುರ, ಫೆ.25: ‘ಲವ್ ಯೂ ಪಾಕ್ ಆರ್ಮಿ ಎನ್ನುವ ಪೋಸ್ಟ್ ಅನ್ನು ಜಿಲ್ಲೆಯ ತಾಳಿಕೋಟೆ ಪಟ್ಟಣ ನಿವಾಸಿ ಮೆರು ಬ್ಯಾಗವಾಟ್ ಎಂಬ ಯುವಕ ಶೇರ್ ಮಾಡಿದ ಆರೋಪದ ಮೇಲೆ ಆತನನ್ನು ಮುದ್ದೇಬಿಹಾಳ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಫೆ.22 ರಂದು ಎ-2-ಝಡ್ ಫೇಸ್ಬುಕ್ ಖಾತೆಯಲ್ಲಿ ಲವ್ ಯೂ ಪಾಕ್ ಆರ್ಮಿ ಎಂದು ಬರೆದ ಪೋಸ್ಟ್ ಹಾಕಲಾಗಿತ್ತು. ಈ ಪೋಸ್ಟ್ ಅನ್ನು ತಾಳಿಕೋಟಿಯ ಮೇರು ಬ್ಯಾಗವಾಟ್ ತನ್ನ ಖಾತೆಯಿಂದ ಹಂಚಿಕೊಂಡಿದ್ದ ಎನ್ನಲಾಗಿದೆ.
ಪಾಕಿಸ್ತಾನದ ಆರ್ಮಿ ಪರ ಬ್ಯಾಗವಾಟ್ ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದ ಬರಹ ಫೇಸ್ಬುಕ್ನಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಆತನನ್ನು ವಶಕ್ಕೆ ಪಡೆದಿರುವ ಮುದ್ದೇಬಿಹಾಳ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Next Story