ಮೈಸೂರು: ಮತ್ತೊಂದು ಕೊರೋನ ವೈರಸ್ ದೃಢ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೇರಿಕೆ
ಮೈಸೂರು: ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಜ್ಯುಬಿಲಿಯಂಟ್ ಫಾರ್ಮಸಿಟಿಕಲ್ (ಔಷಧ ತಯಾರಿಕಾ) ಕಂಪನಿಯಲ್ಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿರುವ 35 ವರ್ಷ ದ ವ್ಯಕ್ತಿಗೆ ಕೊರೋನ ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇವರು ಎಂದಿನಂತೆ ಕಂಪೆನಿಗೆ ಬಂದಿದ್ದು, ಕೊರೋನ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಕೊರೋನ ಸೋಂಕು ಇರುವುದು ಈಗ ದೃಢಪಟ್ಟಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ನಂಜನಗೂಡಿನ ನಗರಸಭೆ ಅಧಿಕಾರಿಗಳು ಕಂಪೆನಿಗೆ ತೆರಳಿ ಆತನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಐಸೋಲೇಷನ್ ವಾಡ್೯ಗೆ ದಾಖಲಿಸಿದ್ದಾರೆ.
ಕೊರೋನ ಸೋಂಕಿತ ವ್ಯಕ್ತಿಯ ಸ್ನೇಹಿತ ಆಸ್ಟ್ರೇಲಿಯಾದಿಂದ ಬಂದಿದ್ದು ಅವರು ಒಂದೇ ರೂಮ್ ನಲ್ಲಿ ಉಳಿದಿದ್ದರು ಎಂದು ತಿಳಿದು ಬಂದಿದೆ.
ಇವರು ಮೈಸೂರಿನಿಂದ ನಂಜನಗೂಡಿಗೆ ಕಂಪೆನಿಯ ಬಸ್ ನಲ್ಲಿ ಬರುತ್ತಿದ್ದು, ಹಾಗಾಗಿ ಬಸ್ ನಲ್ಲಿ ಬರುತ್ತಿದ್ದವರು, ಕಂಪನಿಯಲ್ಲಿ ಕೆಲಸ ಮಾಡುತಿದ್ದವರೆಲ್ಲರನ್ನೂ ತಪಾಸಣೆ ಮಾಡಲಾಗುತ್ತಿದೆ. ಈಗಾಗಲೆ ಇವರ ಕೈಗಳಿಗೆ ಸೀಲ್ ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ.