ಮಂಡ್ಯ: 9 ಮಂದಿಗೆ ಕೊರೋನ ಸೋಂಕು ದೃಢ
ಮಂಡ್ಯ, ಜೂ.25: ಜಿಲ್ಲೆಯಲ್ಲಿ ಗುರುವಾರ 9 ಕೊರೋನ ರೋಗ ಪ್ರಕರಣಗಳು ವರದಿಯಾಗಿದೆ. ಸದರಿ ಪ್ರಕರಣಗಳಲ್ಲಿ 8 ಪ್ರಕರಣಗಳು ಐಎಲ್ಐ ಪ್ರಕರಣವಾಗಿದ್ದು, ಇದರಲ್ಲಿ 6 ಪ್ರಕರಣ ಮದ್ದೂರು ತಾಲೂಕಿನಲ್ಲಿ, ತಲಾ 1 ಪ್ರಕರಣ ಮಂಡ್ಯ ಹಾಗೂ ಪಾಂಡವಪುರ ತಾಲೂಕಿನಲ್ಲಿ ವರದಿಯಾಗಿವೆ. ಮತ್ತೊಂದು ಪ್ರಕರಣ ಬೆಂಗಳೂರು ಜಿಲ್ಲೆಯಿಂದ ಮಂಡ್ಯ ತಾಲೂಕಿಗೆ ಬಂದಿರುವ ಪ್ರಕರಣವಾಗಿದೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 382 ಕೊರೋನ ರೋಗ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 334 ಪ್ರಕರಣಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ 47 ಸಕ್ರಿಯ ಪ್ರಕರಣಗಳು ಐಸೋಲೇಷನ್ ವಾರ್ಡ್ನಲ್ಲಿ ಇವೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
Next Story