ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಆಟೋ, ಬೈಕ್ಗೆ ಬೆಂಕಿ
ಶಿವಮೊಗ್ಗ, ಜು.17: ಶಿವಮೊಗ್ಗದ ಸಿಗೇಹಟ್ಟೆ ಬಡಾವಣೆಯಲ್ಲಿ ಮತ್ತೆ ಕಿಡಿಗೇಡಿಗಳ ಪುಂಡಾಟ ಮುಂದುವರಿದಿದ್ದು, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಗುರುವಾರ ರಾತ್ರಿ ನಗರದ ಸಿಗೇಹಟ್ಟೆ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಆಟೋಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ವಾಹನಗಳು ಸುಟ್ಟು ಹೋಗಿವೆ. ಶ್ರೀನಿವಾಸ್ ಮತ್ತು ಕುಬೇರಪ್ಪ ಎಂಬವರಿಗೆ ಈ ವಾಹನಗಳು ಸೇರಿವೆ.
ಕಳೆದ ವಾರ ಸಹ ಸಿಗೇಹಟ್ಟಿ ಸೇರಿದಂತೆ ಮಂಡ್ಲಿ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಬೈಕ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಈಗ ಮತ್ತೆ ಕೃತ್ಯ ಮುಂದುವರಿಸಿದ್ದು, ಪೊಲೀಸರ ನೈಟ್ ಬೀಟ್ ವೈಫಲ್ಯದಿಂದ ಈ ರೀತಿಯ ಘಟನೆಗಳು ನಡೆಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story