ಮೈಸೂರು: ಕೊರೋನ ಸೋಂಕಿಗೆ ವೈದ್ಯಾಧಿಕಾರಿ ಸಾವು
ಸಾಂದರ್ಭಿಕ ಚಿತ್ರ
ಮೈಸೂರು, ಆ.2: ಚಾಮರಾಜನಗರ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಕೊರೋನ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಡಾ.ರಾಚಯ್ಯ (60) ಕೊರೋನ ಸೋಂಕಿಗೆ ಬಲಿಯಾದವರು.
ಇವರು ಮೈಸೂರು ನಗರ ನಿವಾಸಿಯಾಗಿದ್ದರು. ಕೆಲವು ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ನಿವೃತ್ತಿಗೆ ಒಂದು ತಿಂಗಳು ಇರುವಂತೆ ರಾಚಯ್ಯ ಮೃತಪಟ್ಟಿದ್ದು, ಕೋವಿಡ್ ಮಾರ್ಗಸೂಚಿಗಳಂತೆ ಅಂತ್ಯಸಂಸ್ಕಾರ ನಡೆಸಲಾಯಿತು.
Next Story