ಕೋವಿಡ್19: ರಾಜ್ಯದಲ್ಲಿ ಮತ್ತೆ 4,752 ಮಂದಿಗೆ ಸೋಂಕು ದೃಢ; 98 ಮಂದಿ ಸಾವು
ಸಾವಿನ ಸಂಖ್ಯೆ 2,594ಕ್ಕೆ ಏರಿಕೆ
ಬೆಂಗಳೂರು, ಆ.3: ರಾಜ್ಯದಲ್ಲಿ ರವಿವಾರ ಸಂಜೆಯಿಂದ ಸೋಮವಾರ ಸಂಜೆವರೆಗೆ ಮತ್ತೆ 4752 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,39,571 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 98 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 2,594ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 27 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರು 13, ಬೆಳಗಾವಿ 10, ಧಾರವಾಡ 8, ದಕ್ಷಿಣ ಕನ್ನಡ 7, ಕಲಬುರಗಿ 5, ಹಾಸನ 5, ಬೀದರ್ ನಲ್ಲಿ 3, ಉಡುಪಿಯಲ್ಲಿ 1 ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1,497, ಮೈಸೂರು 372, ಬಳ್ಳಾರಿ 305, ಬಾಗಲಕೋಟೆ 209, ಧಾರವಾಡ 191, ಕಲಬುರಗಿ 170, ಕೊಪ್ಪಳ 157, ಶಿವಮೊಗ್ಗ 155, ದಕ್ಷಿಣ ಕನ್ನಡ 153, ಮಂಡ್ಯ 152, ಹಾಸನ 131, ಉಡುಪಿ 126, ತುಮಕೂರು 122, ರಾಯಚೂರು 115, ಗದಗ 100, ಹಾವೇರಿ 99, ವಿಜಯಪುರ 92, ಯಾದಗಿರಿ 86, ರಾಮನಗರ 68, ಬೆಳಗಾವಿ 60, ಚಿಕ್ಕಬಳ್ಳಾಪುರ 58, ಚಾಮರಾಜನಗರ 52, ಬೀದರ್ 50, ಚಿಕ್ಕಮಗಳೂರು 46, ದಾವಣಗೆರೆ 41, ಕೋಲಾರ 40, ಕೊಡಗು 39, ಚಿತ್ರದುರ್ಗ 33, ಉತ್ತರ ಕನ್ನಡ 31, ಬೆಂಗಳೂರು ಗ್ರಾಮಾಂತರದಲ್ಲಿ 2 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 1,39,571 ಕೊರೋನ ಸೋಂಕಿತರ ಪೈಕಿ 62,500 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 4,776 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 2,594 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 74,469 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.