ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಹಸಿರು ನ್ಯಾಯಾಧೀಕರಣದಿಂದ ತಡೆಯಾಜ್ಞೆ
ಬೆಂಗಳೂರು, ಅ.28: ರಾಜ್ಯ ಸರಕಾರದ ಬಹು ನಿರೀಕ್ಷಿತ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಾಲ್ಕು ವಾರಗಳ ತಡೆಯಾಜ್ಞೆ ವಿಧಿಸಿದೆ.
ತಮಿಳುನಾಡಿನ ಚೆನ್ನೈನಲ್ಲಿರುವ ಗ್ರೀನ್ ಟ್ರಿಬ್ಯುನಲ್ ತಡೆಯಾಜ್ಞೆ ವಿಧಿಸಿರುವ ಹಿನ್ನೆಲೆಯಲ್ಲಿ ಸರಕಾರದ ಬಹು ನಿರೀಕ್ಷಿತ ಯೋಜನೆಗೆ ಭಾರಿ ಹಿನ್ನಡೆ ಉಂಟಾಗಿದೆ.
ನವೆಂಬರ್ 1ರಂದು ಆರಂಭಗೊಳ್ಳಬೇಕಿದ್ದ ಸ್ಟೀಲ್ ಬ್ರಿಡ್ಜ್ ಕಾಮಗಾರಿಗೆ ಹಸಿರು ನ್ಯಾಯಾಧೀಕರಣದ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ.
Next Story