ಬಸ್ ಪಲ್ಟಿ, ಶಾಲಾ ಮಕ್ಕಳಿಗೆ ಗಾಯ
ಸಾಗರ, ಡಿ.25: ಇಲ್ಲಿನ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ತೆರಳುತ್ತಿದ್ದ ಶಾಲಾ ಮಕ್ಕಳಿದ್ದ ಖಾಸಗಿ ಬಸ್ವೊಂದು ಪಲ್ಟಿಯಾಗಿ ಬಸ್ನಲ್ಲಿದ್ದ 32 ಮಂದಿ ಮಕ್ಕಳಿಗೆ ಗಾಯವಾಗಿರುವ ಘಟನೆ ರವಿವಾರ ನಡೆದಿದೆ.
ಸಾಗರ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಸ್ ಪಲ್ಟಿಯಾಗಿ ಗಾಯಗೊಂಡಿರುವ ಹೈಸ್ಕೂಲ್ವೊಂದರ ಎಲ್ಲ ವಿದ್ಯಾರ್ಥಿಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Next Story