ಬೆಂಗಳೂರು: ಕಟ್ಟಡದಿಂದ ಬಿದ್ದು ಟೆಕ್ಕಿ ಸಾವು
ಬೆಂಗಳೂರು, ಜ.19: ಹರ್ಮಾನ್ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಶೋಭಾ ಲಕ್ಷ್ಮೀ ನಾರಾಯಣ(30) ಎಂಬವರು ಕಟ್ಟಡದಿಂದ ಕೆಳಗ್ಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಕಟ್ಟಡದ ನಾಲ್ಕನೆ ಮಹಡಿಯ ಕೆಫೆಟೇರಿಯಾದಿಂದ ಶೋಭಾ ಲಕ್ಷ್ಮೀ ನಾರಾಯಣ ಕೆಳಗೆ ಬಿದ್ದಿದ್ದಾರೆ. ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ವೈಟ್ ಫೀಲ್ಡ್ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.
Next Story