ಎಂ.ಟೆಕ್ ಪರೀಕ್ಷೆ: ರಾಧಿಕಾ ನಾಯರ್ 3 ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್
ಚಿಕ್ಕಮಗಳೂರು, ಫೆ.9: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಮೇ/ಜೂನ್ 2016ರಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಟೆಕ್. ಪರೀಕ್ಷೆಯಲ್ಲಿ ಚಿಕ್ಕಮಗಳೂರು ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ರಾಧಿಕಾ ನಾಯರ್ ಅವರು ಎಂ.ಟೆಕ್. ಪವರ್ ಸಿಸ್ಟಂ ಎಂಜಿನಿಯರಿಂಗ್ (ಇ ಅಂಡ್ ಇ) ನಲ್ಲಿ 1ನೆ ರ್ಯಾಂಕ್ ಮತ್ತು 3 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಘಟಿಕೋತ್ಸವ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಗಿದೆ. ಇವರನ್ನು ಪರಮಪೂಜ್ಯ ಜಗದ್ಗುರು ಡಾ.ಶ್ರೀ ಗುಣನಾಥ ಸ್ವಾಮಿ, ಆಡಳಿತ ಮಂಡಳಿ ಅಭಿನಂಧಿಸಿದೆ ಎಂದು ಪ್ರಾಂಶುಪಾಲ ಡಾ. ಸಿ.ಕೆ.ಸುಬ್ಬರಾಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story