ಅಂತಿಮ ಪಂದ್ಯ :ಟಾಸ್ ಜಯಿಸಿದ ನ್ಯೂಝಿಲೆಂಡ್ ಫೀಲ್ಡಿಂಗ್ ಆಯ್ಕೆ
ತಿರುವನಂತಪುರ, ನ.7: ಮಳೆಯಿಂದಾಗಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವಿನ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯ ತಲಾ 8 ಓವರ್ಗಳಿಗೆ ಸೀಮಿತಗೊಂಡಿದ್ದು, ಟಾಸ್ ಜಯಿಸಿದ ನ್ಯೂಝಿಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದೆ.
ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಮೊದಲ ಬಾರಿ ನಿಗದಿಯಾಗಿರುವ ಪಂದ್ಯ ಭಾರೀ ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭಗೊಂಡಿತು.
ರಾತ್ರಿ 8.23ರ ತನಕ ಮಳೆ ಸುರಿಯಿತು. 9.15 ಕ್ಕೆ ನಾಣ್ಯ ಚಿಮ್ಮುವಿಕೆ ನಡೆಯಿತು. ಬಳಿಕ 9:30ಕ್ಕೆ ಆಟ ಆರಂಭಗೊಂಡಿತು.
ಉಭಯ ತಂಡಗಳು ಸರಣಿಯಲ್ಲಿ ತಲಾ 1 ಪಂದ್ಯಗಳಲ್ಲಿ ಜಯ ಗಳಿಸಿದೆ. ಸರಣಿ ಗೆಲುವಿಗೆ ಈ ಪಂದ್ಯ ನಿರ್ಣಾಯಕವಾಗಿದೆ.
Next Story