ಭಾರತಕ್ಕೆ ಜರ್ಮನಿ ಸವಾಲು
ಭುವನೇಶ್ವರ,ಡಿ.3: ಇಂಗ್ಲೆಂಡ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಸೋಲು ಅನುಭವಿಸಿದ ಭಾರತದ ಹಾಕಿ ತಂಡ ಹಾಕಿ ವರ್ಲ್ಡ್ ಲೀಗ್ ಫೈನಲ್ನಲ್ಲಿ ಸೋಮವಾರ ಜರ್ಮನಿಯನ್ನು ಎದುರಿಸಲಿದೆ.
ಜರ್ಮನಿ ವಿರುದ್ಧ ಜಯ ಗಳಿಸಿದರೆ ಭಾರತಕ್ಕೆ ನಾಕೌಟ್ ಹಂತ ತಲುಪಲು ಹಾದಿ ಸುಲಭವಾಗಲಿದೆ.
ಇಂಗ್ಲೆಂಡ್ ವಿರುದ್ಧ ಅಂತಿಮ ಕ್ವಾರ್ಟರ್ನಲ್ಲಿ ಮಾಡಿದ ಯಡವಟ್ಟಿನಿಂದಾಗಿ ಭಾರತದ ಹಾಕಿ ತಂಡ ಸೋಲು ಅನುಭವಿಸಿತ್ತು.
ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿತ್ತು.ಆದರೆ ಇಂಗ್ಲೆಂಡ್ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಜರ್ಮನಿ ತಂಡ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಜಯ ಗಳಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿತ್ತು.
Next Story