ಮೊದಲ ಟೆಸ್ಟ್ಗೆ ಶಿಖರ್ ಧವನ್ ಅಲಭ್ಯ?
ಮುಂಬೈ, ಡಿ.28: ದಕ್ಷಿಣ ಆಫ್ರಿಕ ವಿರುದ್ಧ ಜನವರಿ 5ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ಗೆ ಆರಂಭಿಕ ದಾಂಡಿಗ ಶಿಖರ್ ಧವನ್ ಆಡುವುದು ಇನ್ನೂ ದೃಢಪಟ್ಟಿಲ್ಲ. ಧವನ್ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಎಂಆರ್ಐ ಪರೀಕ್ಷೆಗೆ ಒಳಪಟ್ಟಿದ್ದರೂ, ಆಯ್ಕೆ ಸಮಿತಿಗೆ ಇನ್ನೂ ಯಾವುದೇ ವರದಿ ಬಂದಿಲ್ಲ.ಧವನ್ ತಂಡದೊಂದಿಗೆ ಆಫ್ರಿಕಕ್ಕೆ ತೆರಳಿದ್ದರೂ, ಮೊದಲ ಟೆಸ್ಟ್ ಲಭ್ಯರಾಗುವ ಕುರಿತು ಈಗಾಗಲೇ ಹೇಳಲಾಗದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಒಂದು ವೇಳೆ ಮೊದಲ ಟೆಸ್ಟ್ಗೆ ಧವನ್ ಅಲಭ್ಯರಾದರೆ, ಉತ್ತಮ ಫಾರ್ಮ್ನಲ್ಲಿರುವ ಕೆ.ಎಲ್. ರಾಹುಲ್ ಅವರು ಮುರಳಿ ವಿಜಯ್ರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ನಲ್ಲಿ 82ರನ್ ಗಳಿಸಿದ್ದ ತಮಿಳುನಾಡಿನ ಅಭಿನವ್ ಮುಕುಂದ್ ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
Next Story