ಕಿವೀಸ್ ಕ್ಲೀನ್ ಸ್ವೀಪ್: ಪಾಕ್ ಗೆ ಮುಖಭಂಗ
ವೆಲ್ಲಿಂಗ್ಟನ್, ಜ.19: ಪಾಕಿಸ್ತಾನ ವಿರುದ್ಧ ಐದನೇ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ 15 ರನ್ಗಳ ಜಯ ಗಳಿಸಿದ್ದು, ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ಸ್ವೀಪ್ ಮಾಡಿದೆ.
ಮಾರ್ಟಿನ್ ಗಪ್ಟಿಲ್ ಶತಕದ ನೆರವಿನಲ್ಲಿ ನ್ಯೂಝಿಲೆಂಡ್ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು.
ಗೆಲುವಿಗೆ 272 ರನ್ ಗಳಿಸಬೇಕಿದ್ದ ಪಾಕಿಸ್ತಾನ ಕಿವೀಸ್ ವೇಗಿ ಮ್ಯಾಟ್ ಹೆನ್ರಿ(53ಕ್ಕೆ 4) ದಾಳಿಗೆ ಸಿಲುಕಿ 49 ಓವರ್ಗಳಲ್ಲಿ 256 ರನ್ಗಳಿಗೆ ಆಲೌಟಾಯಿತು.
ಪಾಕಿಸ್ತಾನದ ಹಾರೀಸ್ ಸೊಹೈಲ್ (63), ಶಹದಾಬ್ ಖಾನ್(54) ಅರ್ಧಶತಕ ದಾಖಲಿಸಿದರು. ಫಾಕರ್ ಝಮಾನ್(12), ಬಾಬರ್ ಅಝಮ್(10), ಫಹೀಮ್ ಅಶ್ರಫ್(23), ಆಮಿರ್ ಯಾಮಿನ್(ಔಟಾಗದೆ 32) ಹಾಗೂ ಮುಹಮ್ಮದ್ ನವಾಝ್(23) ಎರಡಂಕೆಯ ಸ್ಕೋರ್ ದಾಖಲಿಸಿದರು.
ಇದಕ್ಕೂ ಮೊದಲು ನ್ಯೂಝಿಲೆಂಡ್ ಮಾರ್ಟಿನ್ ಗಪ್ಟಿಲ್ 100 ರನ್(126 ಎ, 10ಬೌ, 1ಸಿ) , ರಾಸ್ ಟೇಲರ್ 59 ರನ್,ಮುನ್ರೊ 34 ರನ್, ಕೇನ್ ವಿಲಿಯಮ್ಸನ್ 22 ರನ್, ಗ್ರಾಂಡ್ಹೋಮ್ ಔಟಾಗದೆ 29 ರನ್ ಮತ್ತು ಟಿಮ್ ಸೌಥಿ ಔಟಾಗದೆ 14 ರನ್ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ಪಾಕಿಸ್ತಾನ ಕಳೆದ 30 ವರ್ಷಗಳಲ್ಲಿ ಮೂರನೇ ಬಾರಿಗೆ ಏಕದಿನ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದೆ. 1988ರಲ್ಲಿ ವೆಸ್ಟ್ ಇಂಡೀಸ್ ಮತ್ತು 2010ರಲ್ಲಿ ಆಸ್ಟ್ರೇಲಿಯ ವಿರುದ್ಧ ಪಾಕಿಸ್ತಾನ ಇದೇ ರೀತಿ ಐದು ಪಂದ್ಯಗಳ ಸರಣಿಯಲ್ಲಿ 0-5 ಅಂತರದಲ್ಲಿ ಸೋಲು ಅನುಭವಿಸಿತ್ತು.
ನ್ಯೂಝಿಲೆಂಡ್ ಎರಡನೇ ಬಾರಿ 5-0 ಅಂತರದಲ್ಲಿ ಸರಣಿ ಜಯಿಸಿದೆ. 2000ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಇದೇ ರೀತಿ ಜಯ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್
►ನ್ಯೂಝಿಲೆಂಡ್ 50 ಓವರ್ಗಳಲ್ಲಿ 271/7( ಗಪ್ಟಿಲ್ 100, ಟೇಲರ್ 59; ರುಮ್ಮನ್ 67ಕ್ಕೆ 3).
►ಪಾಕಿಸ್ತಾನ 49 ಓವರ್ಗಳಲ್ಲಿ ಆಲೌಟ್ 256(ಸೊಹೈಲ್ 63, ಶಹದಾಬ್ ಖಾನ್ 54; ಹೆನ್ರಿ 53ಕ್ಕೆ 4, ಸ್ಯಾಂಟ್ನೆರ್ 40ಕ್ಕೆ 3)
►ಪಂದ್ಯಶ್ರೇಷ್ಠ: ಮಾರ್ಟಿನ್ ಗಪ್ಟಿಲ್
►ಸರಣಿಶ್ರೇಷ್ಠ : ಮಾರ್ಟಿನ್ ಗಪ್ಟಿಲ್