ರೈನಾ 59 ಎಸೆತಗಳಲ್ಲಿ 126: ಉ.ಪ್ರ.ಕ್ಕೆ ಜಯ
ಕೋಲ್ಕತಾ, ಜ.22:ಬಂಗಾಳ ವಿರುದ್ಧ ಸೈಯದ್ ಮುಶ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರಪ್ರದೇಶ ಬ್ಯಾಟ್ಸ್ಮನ್ ಸುರೇಶ್ ರೈನಾ 59 ಎಸೆತಗಳಲ್ಲಿ ಔಟಾಗದೆ 126 ರನ್ ಗಳಿಸಿದ್ದಾರೆ.
ರೈನಾ ಶತಕದ ನೆರವಿನಿಂದ ಉ.ಪ್ರ. 20 ಓವರ್ಗಳಲ್ಲಿ 3 ವಿಕೆಟ್ಗೆ 235 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬಂಗಾಳ 16.1 ಓವರ್ಗಳಲ್ಲಿ 160 ರನ್ಗೆ ಆಲೌಟಾಗಿ 75 ರನ್ಗಳಿಂದ ಸೋತಿದೆ.
ಟ್ವೆಂಟಿ-20 ಕ್ರಿಕೆಟ್ನಲ್ಲಿ 2ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ರೈನಾ 59 ಎಸೆತಗಳಲ್ಲಿ 13 ಬೌಂಡರಿ, 7 ಸಿಕ್ಸರ್ಗಳನ್ನು ಸಿಡಿಸಿದರು. ಮುರಳಿ ವಿಜಯ್ 2010ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 127 ರನ್ ಗಳಿಸಿದ್ದು ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.
ರೈನಾ ಭಾರತದ ನಾಯಕ ವಿರಾಟ್ ಕೊಹ್ಲಿ ಬಳಿಕ ಟ್ವೆಂಟಿ-20 ಕ್ರಿಕೆಟ್ನಲ್ಲಿ 7,000 ರನ್ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು.
Next Story