ಸ್ವಿಟ್ಝರ್ಲೆಂಡ್ ಫೆಡ್ ಕಪ್ ಟೀಮ್ಗೆ ಹಿಂಗಿಸ್ ಕೋಚ್
ಲಂಡನ್, ಜ.22: ಮಾಜಿ ವಿಶ್ವ ನಂ.1 ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಫೆಬ್ರವರಿಯಲ್ಲಿ ಪರಾಗ್ವೆಯಲ್ಲಿ ಝೆಕ್ ಗಣರಾಜ್ಯದ ವಿರುದ್ಧ ಆಡಲಿರುವ ಸ್ವಿಸ್ನ ಫೆಡ್ ಕಪ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಟೆನಿಸ್ನಿಂದ ನಿವೃತ್ತಿಯಾಗಿರುವ ಹಿಂಗಿಸ್ 1995 ಹಾಗೂ 2017ರ ನಡುವೆ ಸ್ವಿಸ್ ತಂಡದ ಪರ 19 ಪಂದ್ಯಗಳಲ್ಲಿ ಆಡಿದ್ದರು.
ಹಿಂಗಿಸ್ 2015ರಲ್ಲಿ 17 ವರ್ಷಗಳ ಬಳಿಕ ಸ್ವಿಸ್ ಫೆಡ್ ಕಪ್ ಟೀಮ್ಗೆ ವಾಪಸಾಗಿದ್ದರು.
Next Story