ಇಂಡೋನೇಷ್ಯಾ ಮಾಸ್ಟರ್ಸ್: ಭಾರತ ಕಳಪೆ ಆರಂಭ
ಜಕಾರ್ತ, ಜ.23: ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಕಳಪೆ ಆರಂಭ ಪಡೆದಿದ್ದು ಯಾವೊಬ್ಬ ಶಟ್ಲರ್ಗಳು ಅರ್ಹತಾ ಹಂತವನ್ನು ದಾಟಿಲ್ಲ.
ಪುರುಷರ ಸಿಂಗಲ್ಸ್ ಕ್ವಾಲಿಫೈಯರ್ನಲ್ಲಿ ಅಭಿಷೇಕ್ ಯೆಲೆಗಾರ್ ಇಂಡೋನೇಷ್ಯಾದ ವೆಗಾ ವಿವೊ ನಿವಾಂಡಾ ವಿರುದ್ಧ 20-22, 14-21 ಗೇಮ್ಗಳಿಂದ ಸೋತಿದ್ದಾರೆ. ಶುಭಾಂಕರ್ ಡೇ ಇನ್ನೋರ್ವ ಸ್ಥಳೀಯ ಆಟಗಾರ ಅಹ್ಮದ್ ವೌಲಾನಾ ವಿರುದ್ಧ 9-21, 21-23 ಅಂತರದಿಂದ ಶರಣಾಗಿದ್ದಾರೆ.
ಮಹಿಳೆಯರ ಸಿಂಗಲ್ಸ್ ಕ್ವಾಲಿಫೈಯರ್ನಲ್ಲಿ ಶ್ರೀಕೃಷ್ಣಾ ಪ್ರಿಯಾ ಅವರು ಮಲೇಷ್ಯಾದ ಗೊ ಜನ್ ವೀ ವಿರುದ್ಧ 7-21, 9-21 ಅಂತರದಿಂದ ಸೋತಿದ್ದಾರೆ.
ಪುರುಷರ ಡಬಲ್ಸ್ ಜೋಡಿ ಕಪಿಲ್ ಚೌಧರಿ ಹಾಗೂ ಬ್ರಿಜೇಶ್ ಯಾದವ್ ಇಂಡೋನೇಷ್ಯಾದ ಸಾಬರ್ ಕಾರ್ಯಾಮನ್ ಗುತಾಮ ಹಾಗೂ ಫ್ರೆಂಕಿ ವಿಜಯ ಪುಟ್ರಾ ವಿರುದ್ಧ 12-21, 8-21 ಗೇಮ್ಗಳಿಂದ ಸೋತಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಪ್ರಮುಖ ಸುತ್ತಿಗೆ ಭಡ್ತಿ ಪಡೆದಿದ್ದು ಬುಧವಾರ ಮಲೇಷ್ಯಾದ ವೀ ಫೆಂಗ್ ಚೊಂಗ್ರನ್ನು ಎದುರಿಸಲಿದ್ದಾರೆ.
Next Story