ಶ್ರೀಲಂಕಾ ಫೈನಲ್ಗೆ
ತ್ರಿಕೋನ ಏಕದಿನ ಸರಣಿ
ಢಾಕಾ, ಜ.25: ಸುರಂಗ ಲಕ್ಮಲ್ ನೇತೃತ್ವದ ಬೌಲರ್ಗಳ ಅಮೋಘ ಬೌಲಿಂಗ್ ನೆರವಿನಿಂದ ಶ್ರೀಲಂಕಾ ತಂಡ ಆತಿಥೇಯ ಬಾಂಗ್ಲಾದೇಶವನ್ನು 10 ವಿಕೆಟ್ಗಳಿಂದ ಮಣಿಸಿ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ಗೆ ತಲುಪಿದೆ.
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ 24 ಓವರ್ಗಳಲ್ಲಿ ಕೇವಲ 82 ರನ್ಗೆ ಆಲೌಟಾಯಿತು. ಗೆಲ್ಲಲು ಸುಲಭ ಸವಾಲು ಪಡೆದ ಶ್ರೀಲಂಕಾ ಆರಂಭಿಕ ಆಟಗಾರರಾದ ಉಪುಲ್ ತರಂಗ(39) ಹಾಗೂ ಧನುಷ್ಕಾ ಗುಣತಿಲಕ(35)ನೆರವಿನಿಂದ ಕೇವಲ 11.5 ಓವರ್ಗಳಲ್ಲಿ ವಿಕೆಟ್ನಷ್ಟವಿಲ್ಲದೆ ಗುರಿ ತಲುಪಿತು.
ಬಾಂಗ್ಲಾದ ಪರ ಮುಶ್ಫಿಕುರ್ರಹೀಂ(26) ಅಗ್ರ ಸ್ಕೋರರ್ ಎನಿಸಿಕೊಂಡರೆ, ಶಬ್ಬೀರ್ರಹ್ಮಾನ್(10) ಎರಡಂಕೆಯ ಸ್ಕೋರ್ ದಾಖಲಿಸಿದರು. ಶ್ರೀಲಂಕಾ ಪರ ಲಕ್ಮಲ್ 3 ವಿಕೆಟ್ಗಳನ್ನು ಪಡೆದರೆ, ತಿಸಾರ ಪೆರೇರ, ಡಿ.ಚಾಮೀರ ಹಾಗೂ ಲಕ್ಷ್ಮಣ್ ಸಂಡಕನ್ ತಲಾ 2 ವಿಕೆಟ್ಗಳನ್ನು ಕಬಳಿಸಿದರು.
ಶ್ರೀಲಂಕಾ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಝಿಂಬಾಬ್ವೆ 3ನೇ ಸ್ಥಾನ ಪಡೆದಿದೆ. ಶನಿವಾರ ನಡೆಯಲಿರುವ ಫೈನಲ್ನಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು ಮತ್ತೊಮ್ಮೆ ಎದುರಿಸಲಿದೆ.