‘ಕೊಹ್ಲಿ ಈಗಲೂ ಉತ್ತಮ ನಾಯಕನಲ್ಲ’
ದಕ್ಷಿಣ ಆಫ್ರಿಕದ ಮಾಜಿ ಕೋಚ್ ಜೆನ್ನಿಂಗ್ಸ್
ಸೆಂಚೂರಿಯನ್, ಫೆ.6: ‘‘ನನ್ನ ಪ್ರಕಾರ ವಿರಾಟ್ ಕೊಹ್ಲಿ ಈಗಲೂ ಉತ್ತಮ ನಾಯಕನಾಗಿಲ್ಲ. ಎಂ.ಎಸ್. ಧೋನಿಯಿಂದ ಕೊಹ್ಲಿಗೆ ನಾಯಕತ್ವ ಹಸ್ತಾಂತರವಾದ ಬಳಿಕ ಸಾಕಷ್ಟು ಬದಲಾಗಿದೆ. ಧೋನಿ ತುಂಬಾ ಶಾಂತ ಸ್ವಭಾವದ ನಾಯಕ. ಆದರೆ, ಕೊಹ್ಲಿ ಅದಕ್ಕೆ ತದ್ವಿರುದ್ಧ. ಡ್ರೆಸ್ಸಿಂಗ್ ರೂಮ್ನಲ್ಲಿ ಕೊಹ್ಲಿ ಎಲ್ಲರಿಗೂ ಬೆದರಿಸುತ್ತಾರೆ. ಅವರ ವರ್ತನೆ ಸಹ ಆಟಗಾರರಿಗೂ ಅಚ್ಚರಿ ತಂದಿದೆ’’ ಎಂದು ದಕ್ಷಿಣ ಆಫ್ರಿಕದ ಮಾಜಿ ಕೋಚ್ ರೇ ಜೆನ್ನಿಂಗ್ಸ್ ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿದ್ದ ಜೆನ್ನಿಂಗ್ಸ್ ಅವರು ವಿರಾಟ್ ಕೊಹ್ಲಿ ಅಂಡರ್-19 ಕ್ರಿಕೆಟ್ ತಂಡದಲ್ಲಿದ್ದಾಗ ಅವರ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದ್ದಾರೆ.
"ಕೊಹ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ಯುವ ಆಟಗಾರರಲ್ಲಿ ಭಯ ಹುಟ್ಟಿಸುತ್ತಾರೆ. ಕೊಹ್ಲಿಗೆ ವಯಸ್ಸಾದಂತೆ ಸಹಜವಾಗಿಯೇ ಶಾಂತರಾಗುತ್ತಾರೆ. ಈಗಿನಷ್ಟು ಆಕ್ರಮಣಕಾರಿಯಾಗಿರಲು ಸಾಧ್ಯವಿಲ್ಲ. ಕೆಲವು ಸಂದರ್ಭದಲ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ಭಯದ ವಾತಾವರಣ ಕಡಿಮೆ ಮಾಡಬೇಕಾಗುತ್ತದೆ’’ ಎಂದರು ಜೆನ್ನಿಂಗ್ಸ್ ಹೇಳಿದ್ದಾರೆ.